ಸಾವಯವ ಕೃಷಿ ಕ್ಷೇತ್ರಗಳನ್ನು ಪ್ರಮಾಣೀಕರಿಸಲು ಅನುಸರಿಸಬೇಕಾದ ಕ್ರಮಗಳು

ಸಾವಯವ ಭೂಪರಿವರ್ತನೆ:

ಸಾಂದ್ರ ಬೇಸಾಯ ಪದ್ಧತಿಯಿಂದ ಸಾವಯವ ಬೇಸಾಯ ಪದ್ಧತಿಗೆ ಭೂಪರಿವರ್ತನೆಗೊಳ್ಳಲು ಬೇಕಾಗುವ ಸಮಯ.
  •  ವಾರ್ಷಿಕ ಬೆಳೆಗಳಿಗೆ: 2 ವರ್ಷಗಳು
  • ಬಹುವಾರ್ಷಿಕ ಬೆಳೆಗಳಿಗೆ: 3 ವರ್ಷಗಳು

ಭಾಗಶಃ ಪರಿವರ್ತನೆ:

ಭಾಗಶಃ ಭೂಪರಿವರ್ತನೆಗೆ ಒಳಪಡುವ ಕೃಷಿ ಕ್ಷೇತ್ರಗಳು ಹಾಗೂ ಶೇಖರಣ ಸ್ಥಳಗಳು ಪ್ರತ್ಯೇಕವಾಗಿದ್ದು, ಪರಿವೀಕ್ಷಣೆ ಮಾಡುವಂತಿರಬೇಕು

ಬಿತ್ತನೆ ಬೀಜ/ಸಸ್ಯಾಭಿವೃದ್ಧಿ ಭಾಗಗಳು (Planting material)

ಸಾವಯವ ಕೃಷಿಯಲ್ಲಿ ಉಪಯೋಗಿಸುವ ಬಿತ್ತನೆ ಬೀಜ/ಸಸ್ಯಾಭಿವೃದ್ಧಿ ಭಾಗಗಳು ಪ್ರಮಾಣಿತ ಸಾವಯವ ಮೂಲದ್ದಾಗಿರಬೇಕು, ಇಲ್ಲವಾದಲ್ಲಿ ರಸಾಯನಿಕ ಅನುಪಚರಿತ ಬಿತ್ತನೆ ಬೀಜ/ಸಸ್ಯಾಭಿವೃದ್ಧಿ ಭಾಗಗಳನ್ನು ಬಳಸಬಹುದು.

ಸಾವಯವ ಕೃಷಿಯಲ್ಲಿ ಬಳಸುವ ಗೊಬ್ಬರಗಳು ಮತ್ತು ಸಸ್ಯ ಸಂರಕ್ಷಣೆ:

ಪ್ರಮಾಣಿತ ಸಾವಯವ ಮೂಲದ ಗೊಬ್ಬರಗಳು ಹಾಗೂ ಪೀಡೆನಾಶಕಗಳನ್ನು ಬಳಸಬೇಕು (ಆದಷ್ಟು ಕ್ಷೇತ್ರದಲ್ಲೇ ಉತ್ಪಾದಿಸಿ ಉಪಯೋಗಿಸಬೇಕು).

ನೈಸರ್ಗಿಕ ತಡೆಗೋಡೆ (ಬಫರ್ ಜ್ಹೋನ್):

ಸಿಂಪರಣೆ ಮಾಡಿದ ರಾಸಾಯನಿಕ ಕ್ಷೇತ್ರಗಳಿಂದ ಬರಬಹುದಾದಂತಹ ಕೀಟ ನಾಶಕಗಳ ಹರಡುವಿಕೆ (Drift)ಯನ್ನು ತಡೆಯಲು ಸಾವಯವ ಕೃಷಿ ಕ್ಷೇತ್ರದಲ್ಲಿ ನೈಸರ್ಗಿಕ ತಡೆಗೋಡೆಯನ್ನು (ಬಫರ್ ಜ್ಹೋನ್) ನಿರ್ಮಿಸುವುದು.

ಜೈವಿಕ ವೈವಿಧ್ಯತೆ:

ಜೈವಿಕ ವೈವಿಧ್ಯತೆಯನ್ನು ಕಾಪಾಡಬೇಕು.

ಕೃಷಿ ಉಪಕರಣಗಳು:

ಪ್ರತ್ಯೇಕವಿರಬೇಕು ಇಲ್ಲವಾದಲ್ಲಿ ಸಾವಯವ ಕೃಷಿಯಲ್ಲಿ ಬಳಸುವ ಮುನ್ನ ಸ್ವಚ್ಚಗೊಳಿಸಿ ಉಪಯೋಗಿಸಬೇಕು.

ಕ್ಷೇತ್ರ ಮಟ್ಟದಲ್ಲಿ ದಾಖಲಾತಿಗಳ ನಿರ್ವಹಣೆ

  • ಕ್ಷೇತ್ರ ದಿನಚರಿ (Farm Diary)
  •  ವಾರ್ಷಿಕ ಸಾವಯವ ಕ್ಷೇತ್ರ ನಿರ್ವಹಣಾ ಯೋಜನೆ (Annual Organic Farm Management Plan)
  • ಖರೀದಿಸಿದ ದಾಖಲೆಗಳು
  • ಮಾರಾಟದ ದಾಖಲೆಗಳು
  • ಮಣ್ಣು ಮತ್ತು ನೀರಿನ ಪರೀಕ್ಷಾ ವರದಿಗಳು
  • ಸಾವಯವ ಕೃಷಿಯ ಬಗ್ಗೆ ತರಬೇತಿ ಪಡೆದ ಮಾಹಿತಿ.

ಕೊಯ್ಲು:

ಸಾವಯವ ಬೆಳೆಗಳ ಕೊಯ್ಲಿನಲ್ಲಿ ಹಾಗೂ ಕೊಯ್ಲೋತ್ತರ ಚಟುವಟಿಕೆಗಳಲ್ಲಿ ಬಳಸುವ ಉಪಕರಣಗಳು ರಾಸಾಯನಿಕ ಕಲುಷಿತ ಮುಕ್ತವಾಗಿರಬೇಕು.

ಶೇಖರಣೆ ಮತ್ತು ಸಾಗಣಿಕೆ:

ಸಾವಯವ ಕೃಷಿ ಉತ್ಪನ್ನಗಳನ್ನು ನಿರ್ಭಂದಿತ / ರಾಸಾಯನಿಕ ಕಲುಷಿತ ಮುಕ್ತವಾಗಿ ಶೇಖರಣೆ ಮತ್ತು ಸಾಗಾಣಿಕೆ ಮಾಡಬೇಕು.

ಸಾವಯವ ಕೃಷಿ ಪ್ರಮಾಣೀಕರಣದಲ್ಲಿ ನಿಷೇಧಾತ್ಮಕ ಕ್ರಮಗಳು

ಸಮಾನಾಂತರ ಬೆಳೆ (Parallel production):

ಸಾಂದ್ರ ಹಾಗೂ ಸಾವಯವ ಕೃಷಿ ಕ್ಷೇತ್ರಗಳಲ್ಲಿ ಒಂದೇ/ಏಕರೀತಿಯ ಬೆಳೆಗಳನ್ನು ಬೆಳೆಯಬಾರದು

ಬಿತ್ತನೆ ಬೀಜ/ಸಸ್ಯಾಭಿವೃದ್ಧಿ ಭಾಗಗಳು:

  • ರಾಸಾಯನಿಕವಾಗಿ ಉಪಚರಿಸಿದ ಬಿತ್ತನೆ ಬೀಜ/ಸಸ್ಯಾಭಿವೃದ್ಧಿ ಭಾಗಗಳನ್ನು ಉಪಯೋಗಿಸಬಾರದು
  • ಜೈವಿಕವಾಗಿ ಮಾರ್ಪಾಟುಗೊಂಡ (Genetically Modified Organism) ಬಿತ್ತನೆ ಬೀಜ ಮತ್ತು ಸಸ್ಯಾಭಿವೃದ್ಧಿ ಭಾಗಗಳನ್ನು ಉಪಯೋಗಿಸಬಾರದು.

ಸಾವಯವ ಕೃಷಿ:

ಸಾವಯವ ಕೃಷಿಯಲ್ಲಿ ರಸಾಯನಿಕ ಗೊಬ್ಬರ, ಪೀಡೆನಾಶಕಗಳು ಹಾಗೂ ಬೆಳೆವಣಿಗೆಯ ಹಾರ್ಮೋನ್ ಗಳನ್ನು ಉಪಯೋಗಿಸಬಾರದು.

ಭೂಮಿಯನ್ನು ಆಗಿಂದಾಗೆ ಬದಲಾವಣೆ ಮಾಡಬಾರದು:

ಸಾವಯವ ಕೃಷಿಯಿಂದ ಸಾಂದ್ರ ಕೃಷಿ ಪದ್ಧತಿಗೆ ಹಾಗೂ ಸಾಂದ್ರ ಕೃಷಿ ಪದ್ಧತಿಯಿಂದ ಸಾವಯವ ಕೃಷಿ ಪದ್ಧತಿಗೆ ಆಗಿಂದಾಗೆ ಬದಲಾವಣೆ ಮಾಡಬಾರದು.

ಮನುಷ್ಯನ ಮಲ ಮೂತ್ರ:

ಮನುಷ್ಯನ ಮಲ ಮೂತ್ರವನ್ನು ಸಾವಯವ ಕೃಷಿಯಲ್ಲಿ ಗೊಬ್ಬರವಾಗಿ ಬಳಸಬಾರದು.
Copyright © 2013 ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ | Designed by Nexusinfo