KSOCA ಯಲ್ಲಿ ರೈತರ ಗುಂಪು ಪ್ರಮಾಣೀಕರಣ

ಗುಂಪು ಪ್ರಮಾಣೀಕರಣ :


ಉತ್ಪಾದಕ ಗುಂಪುಗಳು, ರೈತರ ಸಹಕಾರ ಸಂಘಗಳು, ಕರಾರು ಉತ್ಪಾದಕರು ಮತ್ತು ಸಣ್ಣ ಸಂಸ್ಕರಣ ಘಟಕಗಳು ಆಂತರಿಕ ಗುಣಮಟ್ಟ ವ್ಯವಸ್ಥೆಯನ್ನು ಅಳವಡಿಸಿಕೊಂಡು ಪ್ರಮಾಣೀಕರಣ ಮಾಡಿಸುವುದಕ್ಕೆ ಗುಂಪು ಪ್ರಮಾಣೀಕರಣ ಎನ್ನುತ್ತಾರೆ.


ಗುಂಪು ಪ್ರಮಾಣೀಕರಣದ ಅನುಕೂಲಗಳು:

 • ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಗುಂಪಿನಲ್ಲಿ ಪ್ರಮಾಣೀಕರಣ ಮಾಡಿಸುವುದರಿಂದ ಪ್ರಮಾಣೀಕರಣ ವೆಚ್ಚವು ಕಡಿಮೆಯಾಗುತ್ತದೆ. • ಗುಂಪು ಪ್ರಮಾಣೀಕರಣದಿಂದ ಹೆಚ್ಚಿನ ತರಬೇತಿಯನ್ನು ಪಡೆದುಕೊಳ್ಳುವುದರ ಮೂಲಕ ಆಧುನಿಕ ಹಾಗೂ ಸುಧಾರಿತ ಕೃಷಿ ತಂತ್ರಜ್ಞಾನಗಳನ್ನು ತಿಳಿದುಕೊಳ್ಳಬಹುದು. • ಗುಂಪಿನಲ್ಲಿರುವ ರೈತರು ಸಾವಯವ ಕೃಷಿ ಉತ್ಪನ್ನಗಳಿಗೆ ತಗಲುವ ಸಂಸ್ಕರಣಾ ವೆಚ್ಚವನ್ನು ಕಡಿಮೆ ಮಾಡಬಹುದಲ್ಲದೆ, ಸಂಸ್ಕರಣಾ ಸೌಲಭ್ಯವನ್ನು ಸುಲಭವಾಗಿ ಪಡೆದುಕೊಳ್ಳಬಹುದು. • ರಫ್ತುದಾರರು ಅಥವಾ ಮಾರಾಟಗಾರರಿಗೆ ಸಾವಯವ ಕೃಷಿ ಉತ್ಪನ್ನಗಳ   ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುವುದರಿಂದ ಗುಂಪಿನಲ್ಲಿರುವ ಸದಸ್ಯರಿಗೆ ಉತ್ತಮ ಮಾರುಕಟ್ಟೆ ದರ ದೊರೆಯುವುದಲ್ಲದೆ, ಉತ್ಪನ್ನಗಳನ್ನು ಸುಲಭವಾಗಿ ಮಾರಾಟ ಮಾಡಬಹುದಾಗಿರುತ್ತದೆ.


ಗುಂಪು ಪ್ರಮಾಣೀಕರಣಕ್ಕೆ ಬೇಕಾಗುವ ಕನಿಷ್ಠ ಅಗತ್ಯತೆಗಳು

 • ರೈತರ ಗುಂಪು ಕಾನೂನಾತ್ಮಕವಾಗಿ ಒಂದೇ ಅಸ್ತಿತ್ವದ ಅಡಿಯಲ್ಲಿ ನೊಂದಣಿಯಾಗಿರಬೇಕು. • ಗುಂಪಿನಲ್ಲಿರುವ ರೈತರು  ನಿರ್ದಿಷ್ಟ ಭೌಗೋಳಿಕ ಪರಿಮಿತಿಯಲ್ಲಿರಬೇಕು ಹಾಗೂ ಏಕ ರೀತಿಯ ಉತ್ಪಾದನಾ ಪದ್ಧತಿಯನ್ನು ಅನುಸರಿಸುತ್ತಿರಬೇಕು. • ಒಂದು ಗುಂಪಿನಲ್ಲಿ ಕನಿಷ್ಠ 25 ಗರಿಷ್ಠ 500 ರವರೆಗೆ ಸದಸ್ಯರು ಇರಬಹುದು. • ಬಾಹ್ಯ ನಿರೀಕ್ಷಣಾ ಸಂಸ್ಥೆಯು ನಿರೀಕ್ಷಣೆ ಕೈಗೊಳ್ಳುವ ಮೊದಲು ಆಂತರಿಕ ನಿರೀಕ್ಷಕರು ಎಲ್ಲಾ ಕ್ಷೇತ್ರಗಳ ನಿರೀಕ್ಷಣೆಯನ್ನು ಕಡ್ಡಾಯವಾಗಿ ಕೈಗೊಂಡಿರಬೇಕು. • ಗುಂಪು ಪ್ರಮಾಣನ ಕಾರ್ಯ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಈ ಕೆಳಕಂಡ ಸಿಬ್ಬಂದಿಗಳನ್ನು ನೇಮಿಸಬೇಕು.
  • ಆಂತರಿಕ ಗುಣಮಟ್ಟ ವ್ಯವಸ್ಥೆಯ ವ್ಯವಸ್ಥಾಪಕರು
  • ಆಂತರಿಕ ನಿರೀಕ್ಷಕರು
  • ಮಂಜೂರಾತಿ ವ್ಯವಸ್ಥಾಪಕರು/ಸಮಿತಿ
  • ಕ್ಷೇತ್ರ ಅಧಿಕಾರಿಗಳು
  • ಖರೀದಿ ಅಧಿಕಾರಿಗಳು
  • ಉಗ್ರಾಣ ವ್ಯವಸ್ಥಾಪಕರು
  • ಸಂಸ್ಕರಣಾ ವ್ಯವಸ್ಥಾಪಕರು

 • ಗುಂಪು ಪ್ರಮಾಣೀಕರಣದಲ್ಲಿ ನಿರ್ವಹಿಸಬೇಕಾದ ದಾಖಲೆಗಳು:
  • ಕರಾರು: ಪ್ರಮಾಣನ ಮಾನದಂಡಗಳನ್ನು ಪಾಲಿಸುವ ಬಗ್ಗೆ ಗುಂಪಿನ ಸದಸ್ಯರ ನಡುವೆ ಲಿಖಿತ ಒಪ್ಪಂದ.
  • ಸಾವಯವ ಕ್ಷೇತ್ರ ನಿರ್ವಹಣಾ ಯೋಜನೆ (ಬೀಜದಿಂದ ಮಾರಾಟದವರೆಗೆ):
   • ಕ್ಷೇತ್ರದ ಇತಿಹಾಸ
   • ಕ್ಷೇತ್ರದ ನಕ್ಷೆ
   • ಫಾರಂ ಡೈರಿ
   • ರಸೀದಿಗಳು (ಖರೀದಿ/ಮಾರಾಟ)
   • ಗುಂಪು ಕ್ಷೇತ್ರಗಳ ನಕ್ಷೆ (Overview Map) • ಆಂತರಿಕ ಮಾನದಂಡಗಳು: ಗುಂಪು ಪ್ರಮಾಣೀಕರಣಕ್ಕೆ ಅವಶ್ಯವಿರುವ ಆಂತರಿಕ ಮಾನದಂಡಗಳನ್ನು ಸ್ಥಳೀಯ ಭಾಷೆಯಲ್ಲಿ ಅಭಿವೃದ್ಧಿ ಪಡಿಸಿ ಅಳವಡಿಸಿಕೊಳ್ಳಬೇಕು. • ಗುಂಪಿನಲ್ಲಿರುವ ರೈತರು/ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯನ್ನು ನೀಡಬೇಕು.

 • ಗುಂಪು ಪ್ರಮಾಣೀಕರಣದಲ್ಲಿ ಆಂತರಿಕ ನಿರೀಕ್ಷಕರು ಪ್ರತಿ ವರ್ಷದಲ್ಲಿ ಬೆಳೆಗನುಗುಣವಾಗಿ ಕನಿಷ್ಠ ಎರಡು ನಿರೀಕ್ಷಣೆಗಳನ್ನು ಕೈಗೊಳ್ಳಬೇಕು. • ಗುಂಪಿನ ಹೆಸರಿನಲ್ಲಿ PAN ಕಾರ್ಡ್ ಇರಬೇಕು.ಗುಂಪು ಪ್ರಮಾಣೀಕರಣಕ್ಕೆ ನೊಂದಣಿ ಬೇಕಾಗುವ ಕನಿಷ್ಠ ಅಗತ್ಯತೆಗಳು

 • PÁ£ÀÆ£ÁvÀäPÀªÁV UÀÄA¥ÀÄ £ÉÆAzÀtÂAiÀiÁVgÀĪÀÅzÀgÀ §UÉÎ zÁR¯Áw


 • ಗುಂಪಿನ ಹೆಸರಿನಲ್ಲಿ PAN ಕಾರ್ಡ್ ಇರಬೇಕು. • UÀÄA¦£À dªÁ¨ÁÝjAiÀÄÄvÀ ªÀåQÛAiÀÄ DzsÁgï PÁqïð eÉgÁPïì ¥Àæw • UÀÄA¦£À dªÁ¨ÁÝjAiÀÄÄvÀ ªÀåQÛAiÀÄ ¥ÉÆÃmÉÆ


 • UÀÄA¦£À £ÀªÀÄÆ¢vÀ gÉÊvÀgÀ ¥ÀnÖ (gÉÊvÀgÀ ºÉ¸ÀgÀÄ, vÀAzÉAiÀÄ ºÉ¸ÀgÀÄ, ºÀ½îAiÀÄ ºÉ¸ÀgÀÄ, ¸ÀªÉð £ÀA§gï, f¦J¸ï jrAUï (gÉÃSÁA±À & CPÁëA±À), UÀÄA¥ÀÄ ªÀÄvÀÄÛ gÉÊvÀgÀ £ÀqÀÄ«£À PÀgÁgÀÄ M¥ÀàAzÀzÀ ¢£ÁAPÀ)


 • KSOCA PÀbÉÃj¬ÄAzÀ UÀÄA¦£À ¸ÀܼÀPÉÌ ºÉÆÃUÀ®Ä gÀ¸ÉÛAiÀÄ £ÀPÉë (Route Map) & zÀÆgÀ (Q.«ÄÃ)


Copyright © 2013 ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ | Designed by Nexusinfo